Tuesday, January 8, 2008

Mandi Madve : December 04, 2007

ಮಂದಿ ಮದುವೆ.........
ವಿನೋದ weds ರೀನಾ
ದಿನಾಂಕ: ೪-೧೨-೨೦೦೭
ಸ್ಥಳ: ಸಮುದಾಯ ಭವನ, ಗೋಕಾಕ

ಗುಂಪು -೧ : ರಾಘು ,ಅನಿಲ,ನಾಗಿ,ಸಂಧ್ಯಾ ( ಶ್ರೀಮತಿ ನಾಗರಾಜ್ ),ಪುಂಗಿ ( ಟಿಂಕು ) ಮತ್ತು ನಾನು (ಶರತ್)
ಗುಂಪು -೨ : ಕಬೀರ ( ಶಂಕರ) , ಮಾನಸ ( ಶ್ರೀಮತಿ ಕಬೀರ ), ಶೆಟ್ಟಿ , ಮಯೂರಿ ( ಶೆಟ್ಟರ ಶ್ರೀಮತಿ ), ರಾಮ , ಅಶೋಕ್

ದಿನಾಂಕ :೩೦-೧೧-೨೦೦೭ :
ಮಂದಿಗೆ ಅವನ ಮದುವೆ ಎರಡು ದಿನದ ಕಾರ್ಯಕ್ರಮ ಆದರೆ , ನಮಗೆ ( ಗುಂಪು - ೧ ಗೆ ) ನಾಲ್ಕು ದಿನದ ಸುಧೀರ್ಘ ಹಾಗೂ ಹೆಕ್ಟಿಕ್ ಪ್ರೊಗ್ರಾಮ್. ಮೊದಲೇ ನಿರ್ಧರಿಸಿದಂತೆ ನಾವುಗಳು ( ಸಂಧ್ಯಾ ಅವರನ್ನು ಹೊರತುಪಡಿಸಿ) ದಿನಾಂಕ ೩೦-೧೧-೨೦೦೭ , ಶುಕ್ರವಾರದಂದು ಬೆಂಗಳೂರಿನಿಂದ ಧಾರವಾಡಕ್ಕೆ ೨೧:೧೫ ರ ರಾಣಿ ಚೆನ್ನಮ್ಮ ರೈಲನ್ನ್ನೇರಿದೆವು. ಮೂರನೇ ದರ್ಜೆಯ ಹವಾನಿಯಂತ್ರಿತ ( ೩ ಟಯರ್ ಎ ಸಿ ) ಬೋಗಿಯಲ್ಲಿ ಸ್ಥಳವನ್ನು ಕಾದಿರಿಸಲಾಗಿತ್ತು ( ಟಿಕೆಟ್ ಗಳ ಕೃಪೆ : ರಾಘು ). ಸಂಧ್ಯಾ ಅವರು ಎರಡು ಮೂರು ದಿನ ಮೊದಲೇ ಸವದತ್ತಿಗೆ ಪ್ರಯಾಣ ಬೆಳೆಸಿ ಅವರ ತಾಯಿಯ ತವರು ಮನೆಯಲ್ಲಿ ತಂಗಿದ್ದರು . ನಾಗಿ ನಮ್ಮ ಜೊತೆ ಇದ್ದಿದ್ದರಿಂದ ನಾವುಗಳು ಸವದತ್ತಿಗೆ ಹೋಗುವುದು ಅನಿವಾರ್ಯವಾಗಿತ್ತು :). ರೈಲಿನಲ್ಲಿ ವಾತಾವರಣ ಆರಾಮದಯಕ..... ಹರಟೆ, ಫೋಟೋ ಸೆಶನ್ ಮಾಡುತ್ತಾ ಕಲ ಕಳೆದಿದ್ದೆ ಗೊತ್ತಾಗಲಿಲ್ಲ.ನಾಗಿ ಗೆ ಹೊಟ್ಟೆ ಹಸಿವು ( ಕೃಪೆ: ಹೆಂಡತಿ ಊರು ಸೇರಿದ್ದು ) , ಹಾಗಾಗಿ ರೈಲು ತುಮಕೂರಿಗೆ ಬಂದಾಗ ಬಿಸಿ ಇಡ್ಲಿ ವಡೆ ..( ಕಂಪನಿ ಕೊಡದೆ ಇರಕ್ಕೆ ಆಗಲ್ಲ ನೋಡಿ ) .ಸಮಯ ರಾತ್ರಿ ೧೦.೪೫ .ಹೊಟ್ಟೆಗೆ ಬಿಸಿ ಬಿಸಿ ತಿಂಡಿ ಬಿದ್ದ ಮೇಲೆ ಹರಟೆಗೆ ಹುರುಪು ಬಂದು ಚೆನ್ನಾಗಿ ಟಿ ಪಿ ಆಗ್ತಾ ಇತ್ತು .ಆದರೆ ೧೧.೩೦ ರ ಸುಮಾರಿಗೆ ಕುಟುಂಬ ಸಮೇತರಾಗಿ ಪ್ರಯಾಣಿಸುತ್ತಿದ್ದ ಮಹಾನುಭಾವರೊಬ್ಬರು , ಡಿಸ್ಟರ್ಬ್ ಆಗ್ತಾ ಇದೆ , ಲೈಟ್ ಆಪ್ ಮಾಡಿ ಮಲ್ಕೊಳ್ಳಿ ಅಂದಾಗ ಬೇರೆ ದಾರಿ ಇರಲಿಲ್ಲ .........

ದಿನಾಂಕ :೧-೧೨-೨೦೦೭ :
ರೈಲು ಧಾರವಾಡವನ್ನು ತಲುಪಿದಾಗ ಬೆಳಿಗ್ಗೆ ಸುಮಾರು ೬:೧೫ ರ ಸಮಯ...ಸಂಧ್ಯಾ ರವರು ನಮ್ಮನ್ನು ಸವದತ್ತಿಗೆ ಕರೆತರಲು ಕಳುಹಿಸಿದ್ದ ಟೆಂಪೋ ಕ್ರುಇಸೆರ್ (cruiser) ನ ಡ್ರೈವರ್ ಖಸೀಮ ( ಖಾಸಿಮ್ ) ನಮಗಾಗಿ ಕಾಯುತ್ತಿದ್ದ. ನಾವು ಕ್ರುಇಸೆರ್ ನಲ್ಲಿ ಹತ್ತಿ ಸವದತ್ತಿ ಕಡೆಗೆ ಹೊರೆಟೆವು... ದಾರಿಯಲ್ಲಿ ಬಿಸಿ ಬಿಸಿ ಚಾ ಕುಡಿದು ಬೆಳಗ್ಗಿನ ಸುರ್ಯೋದಯದ ಫೋಟೋ ತೆಗೆದುಕೊಂಡೆವು.ಖಸೀಮನ ದ್ರಿವಿಂಗ್ ಸ್ಕಿಲ್ ಬಗ್ಗೆ ಹೇಳಲೇ ಬೇಕು ...ಆಲ್ವೆಸ್ ಒನ್ ಲೆಗ್ ಆನ್ ಆಕ್ಷಲರೆತಾರ್ ಅಂಡ್ ಡೋಂಟ್ ಹಿಟ್ ಬೆಲೌ ೧೦೦ ಕಿ ಮೀ .... ಅದು ನಿಜವಾಗಿಯೂ ಕ್ರುಇಸೆರ್ :). ನಾವು ಸವದತ್ತಿಯಲ್ಲಿ ಸಂಧ್ಯಾ ಅವರ ಮನೆಯನ್ನು ತಲುಪಿದಾಗ ಸಮಯ ೭:೩೦ . ಈ ಮಧ್ಯ ಕೆಲ ದಿನಗಳಿಂದ ದೂರವಿದ್ದ ಮರಿ (ಸಂಧ್ಯಾ ) ಹಾಗೂ ಜಾನು(ನಾಗಿ ) ಮುಖದಲ್ಲಿ ಒಂದು ತರಹದ ಕಳೆ ಎದ್ದು ಕಾಣುತ್ತಿತ್ತು........ಮತ್ತೆ ಅವರ ಮನೆಯಲ್ಲಿ ಚಾ / ಕಾಫಿ ಕುಡಿದೆವು. ಅಂದು ಅವರ ಮನೆಯಲ್ಲಿ ಸಂತರು ಬರುವ ಕಾರ್ಯಕ್ರಮ ಇದ್ದುದರಿಂದ ಮನೆಯವರೆಲ್ಲ ಅದಕ್ಕಾಗಿ ತಯಾರಿ ನಡೆಸಿದ್ದರು .ನಮಗೆ ಹೋಟೆಲ್ ಶಿವಾನಿಯಲ್ಲಿ ಸ್ನಾನದ ವ್ಯವಸ್ಥೆ ಮಾಡಲಾಗಿತ್ತು.

ನಾವು ಸ್ನಾನ ಮುಗಿಸಿ ೯.೩೦ ರ ಸುಮಾರಿಗೆ ಸಂಧ್ಯಾರವರ ಅಜ್ಜಿ ಮನೆಗೆ ಬಂದೆವು.ಎಲ್ಲರೂ ಸಂತರ ಆಗಮನಕ್ಕಾಗಿ ಕಾಯುತ್ತಿದ್ದರು...ಮನೆಗೆ ಬಂದ ಅಳಿಯ ನಾಗಿಗೆ ಸ್ಪೆಷಲ್ ಡ್ರೆಸ್ ಹಾಕುವಂತೆ ಮರಿ ಇಂದ ಆದೇಶ ...ಅದರಂತೆ ನಾಗಿ ಟಿಪಿಕಲ್ ನಾರ್ತ್ ಕರ್ನಾಟಕ ಶೈಲಿಯಲ್ಲಿ , ತಲೆ ಮೇಲೆ ಟೋಪಿ ಇಟ್ಕೊಂಡು ಪಂಚೆ ಕಟ್ಟಿಕೊಂಡರು .ನಂತರ ಸಂತರ ಆಗಮನ .... ಮನೆಯವರೆಲ್ಲರೂ ಸೇರಿ ಪೂಜೆ ..ಜಾನು ಹಾಗೂ ಮರಿ ಕೂಡ ಕೈ ಜೋಡಿಸಿದರು ..... ನಂತರ ಸಂತರಿಂದ ಭಜನೆ ಕಾರ್ಯಕ್ರಮ ಇದ್ದುದರಿಂದ ನಾವು ಸವದತ್ತಿ ಎಲ್ಲಮ್ಮ ಗುಡ್ಡ ನೋಡಿಬರಲು ಹೊರಟೆವು....
ಶನಿವಾರ ಆದ್ದರಿಂದ ಎಲ್ಲಮ್ಮನ ಗುಡ್ಡದಲ್ಲಿ ಜನ ಜಂಗುಳಿ ಇರಲಿಲ್ಲ ( ಮಂಗಳವಾರ ಮತ್ತು ಶುಕ್ರವಾರದಂದು ವಿಪರೀತ ಜನ ಇರುತ್ತಾರಂತೆ ) .ಎಲ್ಲಮ್ಮನ ದರ್ಶನ ಪಡೆದು ಕೆಲ ಛಾಯಾಚಿತ್ರಗಳನ್ನು ತೆಗೆದುಕೊಂಡು ಇನ್ನೊಂದು ( alternate route) ದಾರಿಯಲ್ಲಿ ಮನೆ ಕಡೆ ಹೊರಟೆವು . ದಾರಿಯಲ್ಲಿ ಬೆಟ್ಟದ ಮೇಲಿಂದ ಮಲಪ್ರಭಾ ಡ್ಯಾಮ್ ನ ಹಿನ್ನೀರಿನ ದೃಶ್ಯವನ್ನು ನೋಡಿ , ಸ್ವಲ್ಪ ಸಮಯ ಅಲ್ಲಿ ಕಳೆದು ಮನೆಗೆ ಬರುವ ಹೊತ್ತಿಗೆ ೧೧:೩೦ ಆಗಿತ್ತು ....ನಂತರ ಉಪ್ಪಿಟ್ಟು ತಿಂದು ಬೇಗನೆ ಬಾದಾಮಿ ಗೆ ಹೊರಡುವ ತರಾತುರಿ ...ಆದರೆ ಅಳಿಯ ನಾಗಿ ಮತ್ತು ಮೊಮ್ಮಗಳು ಸಂಧ್ಯಾ ಎಲ್ಲರಿಗೂ (ಬಗ್ಗಿ ) ನಮಸ್ಕಾರ ಮಾಡಿ ಹೊರಡುವ ಹೊತ್ತಿಗೆ ೧:೦೦ ಘಂಟೆ . ಸಂಧ್ಯಾರ ಅಮ್ಮ ಮತ್ತು ತಮ್ಮ ನಮ್ಮ ಜೊತೆ ಜೀಪನ್ನೆರಿದರು ( ಕ್ರುಇಸೆರ್ ) ...ಅವರು ದಾರಿಯಲ್ಲಿ ಇಳಿದು ಬಾಗಲಕೊಟೆಗೆ ಹೋಗುವರಿದ್ದರು....

ಬಾಗಲಕೋಟೆ ಇಂದ ಬಾದಾಮಿಗೆ ಸುಮಾರಾಗಿ ೯೦ ಕಿ ಮೀ ಗಳ ದೂರ. ಅಷ್ಟೇನೂ ಉತ್ತಮವಲ್ಲದ ರಸ್ತೆ ಆದ್ದರಿಂದ ನಾವು ಸುಮಾರು ೩:೦೦ ರ ಹೊತ್ತಿಗೆ ಬಾದಾಮಿ ತಲುಪ ಬಹುದೆಂದು ನಿರೀಕ್ಷಿಸಿದ್ದೆವು ...ಆದರೆ ಡ್ರೈವ್ ಮಾಡುತ್ತಿರುವದು ಯಾರು ?? ೨.೦೦ ರ ಹೊತ್ತಿಗೆ ನಾವು ಬಾದಾಮಿ ತಲುಪಿದೆವು. ಬಾದಾಮಿಯಲ್ಲಿ ಗುಹಾಂತರ ದೇವಾಲಯ ನೋಡಲು ನಾಗಿ ಟಿಕೆಟ್ ತೆಗೆದುಕೊಂಡು ಬಂದರು...ಇಮ್ಮಡಿ ಪುಲಿಕೇಶಿಯ ಕಾಲದ ಈ ಗುಹಾಂತರ ದೇವಾಲಯಗಳನ್ನು ನೋಡಿ ಆಶ್ಚರ್ಯ ಚಕಿತರಾಗದವರಿಲ್ಲ ... ಒಂದೇ ಒಂದು ಪದದಲ್ಲಿ ಹೇಳುವದಾದರೆ "ಅದ್ಭುತ"..... ಈ ಗುಹಾಂತರ ದೇವಾಲಯವು ಕಲ್ಲಿನ ಒಂದು ಬೆಟ್ಟದಲ್ಲಿ ಕಡೆಯಲ್ಪಟ್ಟಿದೆ.. ಈ ದೇವಾಲಯವಿರುವ ಗುಡ್ಡದ ಪಕ್ಕದಲ್ಲೇ ( ಕೆಳಗೆ ) ಒಂದು ಕೆರೆ ಇದೆ . ಎಲ್ಲರೂ , ಎಲ್ಲಾ ರೀತಿಯ ( ಸೋಲೋ , ಗ್ರೂಪ್ , ಕಪಲ್ etc ) ಫೋಟೊಗಳಿಗೆ ಫೋಸ್ ನೀಡಿದರು .... ಸಾಕಷ್ಟು ಫೋಟೋಗಳನ್ನು ತೆಗೆದುಕೊಂಡು ಕೆಳಗೆ ಬರುವ ಹೊತ್ತಿಗೆ ೩:೩೦ .. ನಂತರ ಖಾನಾವಳಿಯಲ್ಲಿ ಸಕ್ಕತ್ ಖಾರದ ಊಟ ...ಸಂಧ್ಯಾರವರು ಸಜ್ಜಿ ರೊಟ್ಟಿ ಊಟ ಗಡದ್ ಆಗಿ ಹೊಡೆದರು . ಊಟ ಮುಗಿಸಿ ಹೊರಗೆ ಬಂದಾಗ ಕಣ್ಣಿಗೆ ಬಿದ್ದಿದ್ದು ಎಳನೀರು... ಖಾರ ಕಡಿಮೆ ಮಾಡಲು ಎಳನೀರಿನ ಸೇವನೆ . ಬಾದಾಮಿ ಇಂದ ೫ ಕಿ ಮೀ ದೂರವಿರುವ ಬನಶಂಕರಿ ಗೆ ಪ್ರಯಾಣ . ದೇವಸ್ಥಾನದಲ್ಲಿ ಅಮ್ಮನವರ ದರ್ಶನ ಮಾಡಿ ೪.೩೦ ರ ಹೊತ್ತಿಗೆ ೧೦ ಕಿ ಮೀ ದೂರದ ಮಹಾಕೂಟಕ್ಕೆ ಹೊರಟೆವು.. ಮಹಾಕೂಟ ಒಂದು ತಂಪಾದ ಸ್ಥಳ .. ಇಲ್ಲಿ ಬೆಟ್ಟದ ನಡುವೆ ಒಂದು ದೇವಸ್ಥಾನವಿದ್ದು , ದೇವಸ್ಥಾನದ ಪಕ್ಕದಲ್ಲಿ ಒಂದು ಕೊಳ ( ಕಲ್ಯಾಣಿ ) ಇದೆ . ಕೊಳದ ತಳದಲ್ಲಿ ಒಂದು ರೀತಿಯ ದ್ವಾರವಿದ್ದು ಅಲ್ಲಿಂದ ಒಂದು ಸಣ್ಣ ಲಿಂಗವಿರುವ ದೇವಾಲಯವನ್ನು ಪ್ರವೇಶಿಸಬಹುದು .ರಾಘು ಮತ್ತು ನಾಗಿ ನೀರಿನಲ್ಲಿ ಮುಳುಗಿ ದೇವಸ್ಥಾನ ನೋಡಲು ಮುಂದಾದರು.. ನಾಗಿ ನೀರಿನಲ್ಲಿ ಮುಳುಗಿ ದ್ವಾರದ ಮೂಲಕ ದೇವಸ್ಥಾನ ಪ್ರವೇಶಿಸಿದರು . ರಾಘು ಕೂಡ ಸ್ವಲ್ಪ ಪ್ರಯಾಸಪಟ್ಟು ದೇವಸ್ಥಾನ ನೋಡಲು ಸಾಧ್ಯವಾಯಿತು.ಈ ನೀರಿನ ಕೊಳದ ತಳದಿಂದ ನೀರಿನ ಗುಳ್ಳೆಗಳು ಏಳುತ್ತಿದ್ದವು ಮತ್ತು ನೀರು ಬೆಚ್ಹಗಿತ್ತು. ಮಹಾಕೂಟದಿಂದ ಪಟ್ಟದಕಲ್ಲಿಗೆ ಹೋದೆವು . ಇಲ್ಲಿ ಉದ್ಯಾನದ ನಡುವೆ ಸುಂದರ ಸಣ್ಣ ಪುಟ್ಟ ದೇವಾಲಯಗಳಿವೆ. ಈ ದೇವಾಲಯಗಳು ಸುಮಾರು ೧೨೦೦ ವರ್ಷಗಳಷ್ಟು ಹಳೆಯವು . ದೇವಾಲಯಗಳು ಭಗ್ನಗೊಂಡಿದ್ದರೂ ನೋಡಲು ಸುಂದರವಾಗಿ, ಆಕರ್ಷಣೀಯ ವಾಗಿದೆ. ಪಟ್ಟದಕಲ್ಲಿನಿಂದ ಐಹೊಳೆ ಕಡೆಗೆ ಹೊರಟೆವು . ಆದರೆ ಸಮಯ ಆಗಲೇ ೬:೩೦ ಆದ್ದರಿಂದ ಐಹೊಳೆ ನೋಡಲು ಸಾಧ್ಯವಾಗಲಿಲ್ಲ . ನಮ್ಮ್ದ ಮುಂದಿನ ಲಕ್ಷ್ಯ ಬಾಗಲಕೋಟೆ . ಐಹೊಳೆ ಇಂದ ಸುಮಾರು ೪೦ ಕಿ ಮೀ ದೂರ ...ಈ ದೂರವನ್ನು ಕ್ರಮಿಸಿ ಬಾಗಲಕೋಟೆ ತಲುಪುವ ಹೊತ್ತಿಗೆ ರಾತ್ರಿ ೭:೧೫ ಆಗಿತ್ತು.
ಬಾಗಲಕೋಟೆಯಲ್ಲಿ ಸಂಧ್ಯಾರವರ ದೊಡ್ಡಪ್ಪನ ( ಕಾಕಾ & ಕಾಕೂ ) ಮನೆಗೆ ಹೋದೆವು .ಆ ಸಮಯಕ್ಕೆ ಸವದತ್ತಿಇಂದ ನಮ್ಮ ಜೊತೆ ಹೊರಟಿದ್ದ ಸಂಧ್ಯಾರವರ ತಾಯಿ ಮತ್ತು ತಮ್ಮ ಅಲ್ಲಿದ್ದರು .ನಾವು ಅವರ ಮನೆಯಲ್ಲಿ ಚಾ ಕುಡಿದು ಹೋಟೆಲ್ ದುರ್ಗಾವಿಹಾರ ದಲ್ಲಿ ಚೆಕ್ ಇನ್ ಮಾಡಿದೆವು.ಈ ಹೋಟೆಲ್ ಏನೋ ಹೇಳ್ತಾರಲ್ಲ , ಹೊರಗೆಲ್ಲ ಥಳಕು , ಒಳಗೆ ಬರೀ ಹುಳುಕು, ಆ ತರಹ . ಅಲ್ಲಿ ಒಂದು ಗಂಟೆ ಕಾರ್ಡ್ಸ್ ( judgement ) ಆಡಿದೆವು.. ಆಟ ಸ್ವಲ್ಪ ಹೊಸತು ಆದ್ದರಿಂದ ಎಲ್ಲರಿಗೂ ಅದನ್ನು ಕಲಿಯುವ್ದಕ್ಕೆ ಸ್ವಲ್ಪ ಸಮಯ ಹಿಡಿಯಿತು. ಸುಮಾರು ೯.೦೦ ರ ಹೊತ್ತಿಗೆ ಸಂಧ್ಯಾರವರ ದೊಡ್ಡಪ್ಪನ ಮನೆಗೆ ಹೋದೆವು.ಅಲ್ಲಿ ಊಟದ ಪ್ರೊಗ್ರಾಮ್. ರಾಯಲ್ ಊಟ , ಚಪಾತಿ , ಪಲ್ಯ , ತುಪ್ಪ , ಸಾರು ಮತ್ತು ಗುಲಾಬ್ ಜಾಮೂನ್ .ಎಲ್ಲರೂ ಸಕ್ಕತ್ತಾಗಿ ಬ್ಯಾಟಿಂಗ್ ಮಾಡಿದರು . ಸುಮಾರು ೧೦:೦೦ ರ ಹೊತ್ತಿಗೆ ಹೋಟೆಲ್ ಗೆ ಬಂದೆವು.ನಂತರ ಕಾರ್ಡ್ಸ್ ಆಟ ಶುರು... ಸುಮಾರು ೨:೦೦ ಗಂಟೆ ವರೆಗೂ ನಾನ್ ಸ್ಟಾಪ್ ಆಟ . ಪುಂಗಿ ಭರ್ಜರಿ ಆಟ ಆಡಿ ಎಲ್ಲರನ್ನೂ ಮೀರಿಸಿಬಿಟ್ಟ .ಶಬ್ಹಾಶ್ ಪುಂಗಿ (ಅಲಿಯಾಸ್ ಟಿಂಕು).......ಈ ದಿನದ schedule hectic ಆಗಿತ್ತು. ಅರ್ಧ ದಿನದಲ್ಲಿ ಸುಮಾರು ೧೫೦ ಕಿ ಮೀ ನಷ್ಟು ಸುತ್ತಾಟ ...ಸಾಕಷ್ಟು ಜಾಗಗಳ ವೀಕ್ಷಣೆ.....ಮಲಗಿದ ತಕ್ಷಣ ನಿದ್ರೆ ...ಎಚ್ಚರ ಆದಾಗ ಬೆಳಿಗ್ಗೆ ೭.೩೦.

ದಿನಾಂಕ : ೨-೧೨-೨೦೦೭ :
ಹಿಂದಿನ ದಿನ ಸಾಕಸ್ತು ಸುತ್ತಾಟ ಆದ್ದರಿಂದ , ಇವತ್ತು ಆದಷ್ಟೂ ರೆಲಕ್ಷ್ ( relax) ಮಾಡುವ ಪ್ಲಾನ್.ನೋಡಬೇಕಾದ ಸ್ಥಳಗಳು ಎರಡೇ , ೧) ಕೂಡಲಸಂಗಮ ೨)ಆಲಮಟ್ಟಿ . ಒಟ್ಟು ದೂರ ಸುಮಾರು ೧೦೦ ಕಿ ಮೀ ಗಳು.
ಸಂಧ್ಯಾರವರ ದೊಡ್ಡಪ್ಪನ ಮನೆಯವರು ಅವರ ಮನೆ ದೇವರನ್ನು ನೋಡಲು ಬೆಳಿಗ್ಗೆ ಬೇಗನೆ ಹೊರಡುವವರಿದ್ದರು. ನಾವುಗಳು ಸ್ನಾನ ಮುಗಿಸಿ ರೆಡಿ ಆಗುವ ಹೊತ್ತಿಗೆ ೮:೩೦ .ಆ ಹೊತ್ತಿಗೆ ಸಂಧ್ಯಾ ನಮಗೆ ಮಧ್ಯಾನ್ಹದ ಊಟ ತಂದು ಕೊಟ್ಟು ಹೋದರು.ಬೆಳಿಗ್ಗೆ ಅಷ್ಟು ಹೊತ್ತಿಗೆ ಚಪಾತಿ , ಪಲ್ಯ , ಚಿತ್ರಾನ್ನ,ಮೊಸರನ್ನದ ಊಟ ರೆಡಿ ಮಾಡಿ, ಕಟ್ಟಿ (pack maadi ) ಕಳುಹಿಸಿದ್ದರು .

ನಾವು ೮.೩೦ ರ ಹೊತ್ತಿಗೆ ಬಾಗಲಕೋಟೆ ಇಂದ ಕೂಡಲಸಂಗಮ ದತ್ತ ಹೊರಟೆವು.ಬಾಗಲಕೋಟೆ ಯ ನವನಗರದ ಹೋಟೆಲೊಂದರಲ್ಲಿ ಭರ್ಜರಿ ಬ್ರೇಕ್ ಫಾಸ್ಟ್ .. ಕೂಡಲಸಂಗಮ ಸುಮಾರು ೪೫ ಕಿ ಮೀ ದೂರ. ದಾರಿಯಲ್ಲಿ ಸುಂದರ ಸೂರ್ಯಕಾಂತಿ ಹೊಲಗಳು ... ಫೋಟೋ ಸೆಶನ್ ಬಗ್ಗೆ ಹೇಳಬೇಕಿಲ್ಲ .... :) . ಸುಮಾರು ೧೦.೧೫ ರ ಹೊತ್ತಿಗೆ ಕೂಡಲ ಸಂಗಮ ತಲುಪಿದೆವು. ಇದು ೩ ನದಿಗಳ ಸಂಗಮ ಸ್ಥಳ ( ಕೃಷ್ಣ , ಮಲಪ್ರಭ ಹಾಗೂ ಘಟಪ್ರಭಾ ) ಹಾಗೂ ಬಸವಣ್ಣನವರು ಐಕ್ಯವಾದ ಸ್ಥಳ.ಐಕ್ಯ ಸ್ಥಳ ( ಲಿಂಗ )ವು ನೀರಿನ ಮಧ್ಯದಲ್ಲಿದೆ. ಅದನ್ನು ನೋಡಲು ಅನುಕೂಲವಾಗುವಂತೆ ಒಂದು ಸುಂದರ ಸೇತುವೆ ನಿರ್ಮಿಸಿದ್ದಾರೆ. ಸೇತುವೆ ದಾಟಿ , ಮೆಟ್ಟಿಲುಗಳ ಮೂಲಕ ಕೆಳಗಿಳಿದು ಲಿಂಗ ನೋಡಲು ಹೋಗಬೇಕು. ಅದೇ ಸ್ಥಳದಲ್ಲಿ ಮೇಲೆ ನಿಂತು ನೋಡಿದರೆ ಅಪಾರ ಜಲರಾಶಿ ... ಪುಂಗಿಗೆ ಶಿವನಸಮುದ್ರ.
ಲಿಂಗದ ದರ್ಶನ ಪಡೆದು , auditorium ಗೆ ಹೋದೆವು. ವಿಶಾಲವಾದ ಇದರಲ್ಲಿ ಸುಮಾರು ೩೫೦೦ ಜನ ಕೂಡ ಬಹುದಾಗಿದೆ .ನಂತರ ೨೫ ಕಿ ಮೀ ದೂರದ ಆಲಮಟ್ಟಿಗೆ ಪ್ರಯಾಣ. ನಾನು ೨೨ ವರ್ಷಗಳ ಹಿಂದೆ ಇದ್ದ ಮನೆ , ಕಲಿತ ಶಾಲೆ ನೋಡಿ .....ಏನೋ ಒಂಥರಾ ....... ,ಅಲ್ಲಿ ಕಪ್ಪು ಬಿಳುಪು ಫೋಟೋ ಶೂಟ್. ಸಮಯ ಸುಮಾರು ೧.೦೦ . ನಂತರ ಆಲಮಟ್ಟಿ ಡ್ಯಾಮ್ ಹಾಗೂ ಪಾರ್ಕ್ ನೋಡುವ ಸಮಯ..ಸ್ವಲ್ಪ ಹೊತ್ತು ಪಾರ್ಕಿನಲ್ಲಿ ಸುತ್ತಾಟ ...೨:೦೦ ರ ಹೊತ್ತಿಗೆ ಊಟಕ್ಕೆ ಕೂತೆವು ..ಹೊಟ್ಟೆ ಬಿರಿಯುವಷ್ಟು ತಿಂದರೂ ಡಬ್ಬಿಗಳು ಖಾಲಿ ಆಗಲಿಲ್ಲ ..
ಹಾಗೂ ಹೀಗೂ ಊಟ ಮುಗಿಸಿ ಮತ್ತಷ್ಟು ಸುತ್ತಾಡಿ , ಪುನಃ ಬಾಗಲಕೋಟೆಗೆ ಹೊರಡಬೇಕೆನ್ನುವಷ್ಟರಲ್ಲಿ ಸಂಧ್ಯಾ ಅವರ ಕಾಕಾ , ತಮ್ಮ,ಡ್ಯಾಡಿ ಹಾಗೂ ಉಳಿದವರು ಆಲಮಟ್ಟಿ ಡ್ಯಾಮ್ ನೋಡಲು ಬಂದರು . ( ಮನೆ ದೇವರ ದರ್ಶನ ಮುಗಿಸಿ ) .ಅವರನ್ನು ಸ್ವಲ್ಪ ಮಾತಾಡಿಸಿ ಬಾಗಲಕೋಟೆಗೆ ಹೊರಟು ಸುಮಾರು ೪.೩೦ ರ ಹೊತ್ತಿಗೆ ದುರ್ಗಾ ವಿಹಾರಕ್ಕೆ ಬಂದೆವು.ಸಂಜೆ ಹಾಗೇ ಬಾಗಲಕೋಟೆ ಸುತ್ತಾಡಿ ,ಚಾ / ಕಾಫಿ ಕುಡಿದು ೭.೦೦ ರ ಹೊತ್ತಿಗೆ ಕಾರ್ಡ್ಸ್ ಆಡಲು ಕುಳಿತೆವು....ಯಥಾ ಪ್ರಕಾರ ಪುಂಗಿಯ ವಿಜಯೋತ್ಸವ ಮುಂದುವರೆದಿತ್ತು ....ಒಂದು ಕಾರ್ಡ್ ಬಿಟ್ಟ , ರಾಘು ಅನಲ್ಯ್ಸೆ ಮಾಡ್ದ ....ಆಗಲೇ ಗೊತ್ತಾಗಿದ್ದು ಸತ್ಯ .. :) ....ಮುಂದಿನ ಆಟಗಳಲ್ಲಿ ಪುಂಗಿ ಕಾರ್ಡ್ ಡ್ರಾಪ್ ಮಾಡಿದಾಗಲೆಲ್ಲ ಎಲ್ಲಾರೂ ಅವನನ್ನ ಗುರಾಯಿಸಿ ಪ್ರಶ್ನೆ ಕೇಳುವುದು ಮಾಮೂಲಿ ಅಯಿತು .. ಜೊತೆಗೆ ಹೊಟ್ಟೆ ಬಿರಿಯುವಷ್ಟು ನಗು...

ಸುಮಾರು ೨೧:೦೦ ರ ಹೊತ್ತಿಗೆ ಮತ್ತೆ ಊಟದ ಕಾರ್ಯಕ್ರಮ.. ಭರ್ಜರಿ ಊಟ ಮಾಡಿ ಹೋಟೆಲಿಗೆ ವಾಪಸ್ ಬಂದು ಕಾರ್ಡ್ಸ್ ಆಡಲು ಶುರು ಮಾಡಿದೆವು ......ರಾತ್ರಿ ೨:೦೦ ರ ವರಗೆ ನಿಲ್ಲದ ಆಟ..ಜೊತೆಗೆ ಪುಂಗಿಯ ಕಾರ್ಡ್ಸ್ ಕಾಮಿಡಿ :)
ಈ ನಡುವೆ ಹಿಂದಿನ ದಿನ ರಾತ್ರಿ ನಾಗಿ ಸಂಧ್ಯಾ ದೊಡ್ಡಪ್ಪನ ಮನೇಲಿ ಇರೋದ್ ಬಿಟ್ಟು , ನಮ್ಮ ಜೊತೆ ಹೋಟೆಲ್ನಲ್ಲೇ ಮಲಗಿದ್ದರು ....ಆದ್ದರಿಂದ ಸಂಧ್ಯಾಗೆ ಸಿಟ್ಟು ಬಂದಿತ್ತು....ಅದನ್ನ ಕಡಿಮೆ ಮಾಡೋಕೊಸ್ಕರ ನಾಗಿ ಈ ದಿನ ರಾತ್ರಿ ಅವರ ದೊಡ್ಡಪ್ಪನ ಮನೆಯಲ್ಲಿ ಮಲಗುವಂತೆ ಅಯಿತು .....ಗಂಡ ಹೆಂಡಿರ ಜಗಳ ಉಂಡು ಮಲಗೊತನಕ .....
ಈ ವೇಳೆಗೆ ಬೆಂಗಳೂರಿನಿಂದ ಮಂದಿ ಮತ್ತು ಅವನ ಮನೆಯವರು ಗೊಕಾಕಿಗೆ ಬರಲು ೯:೧೫ ರ ರಾಣಿ ಚೆನ್ನಮ್ಮ ರೈಲನ್ನು ಹಿಡಿದಿದ್ದರು... ಲಾಸ್ಟ್ ಮಿನಿಟ್ ಅದ್ಜುಸ್ತ್ಮೆಂತ್ ಮಾಡಿದ ಮಂದಿ ವೈತಿಂಗ್ ಲಿಸ್ಟ್ ನಲ್ಲಿ :( ... ಅವನಿಗೆ ಬರ್ತ್ ಕಾಂಫಿರ್ಮ್ ಆಗಿ ಅವನು ಮಲಗುವ ಹೊತ್ತಿಗೆ ರಾತ್ರಿ ೧೨:೦೦ , ಪಾಪ ಮದುವೆಯಾಗುವ ಮೊದಲೂ ನಿದ್ದೆ ಇಲ್ಲ . :)... ಮಾರನೆಯ ದಿನ ಬೆಳಿಗ್ಗೆ ಸುಮಾರು ೧೧:೦೦ ರ ಹೊತ್ತಿಗೆ ಗೋಕಾಕ ತಲುಪುವ ನಿರೀಕ್ಷೆ ...

ದಿನಾಂಕ : ೩:೧೨:೨೦೦೭ ( ಮದುವೆಯ ಹಿಂದಿನ ದಿನ )...
ಈ ದಿನ ನಾವು ಬಾಗಲಕೋಟೆಇಂದ ಗೋಕಾಕಿಗೆ ಹೊರಟು ಮದುವೆ ಮನೆ ಸೇರುವ ಕಾರ್ಯಕ್ರಮ....ಅದರಂತೆ ನಾವು ಬೆಳಿಗ್ಗೆ ೮.೩೦ ರ ಹೊತ್ತಿಗೆ ರೆಡಿ ಆಗಿ ಸಂಧ್ಯಾರವರ ದೊಡ್ಡಪ್ಪನ ಮನೆಗೆ ಹೋಗಿ ಅಲ್ಲಿ ಉಪ್ಪಿಟ್ಟು ತಿಂದು , ಹೋಟೆಲಿಗೆ ಬಂದು ಚೆಕ್ ಔಟ್ ... ಸುಮಾರು ೯:೩೦ ರ ಹೊತ್ತಿಗೆ ಗೋಕಾಕಿಗೆ ಹೋಗಲು , ಬಸ್ ಹಿಡಿಯುವ ಸಲುವಾಗಿ ಬಾಗಲಕೋಟೆ ರೈಲು ನಿಲ್ದಾಣದ ಬಳಿ ಬಂದೆವು .. ಅಲ್ಲಿಂದ ಯರಗಟ್ಟಿಗೆ ಹೋಗುವ ಬೆಳಗಾವಿ ಬಸ್ಸನ್ನು ಹತ್ತಿ ಸುಮಾರು ೧೧:೦೦ ರ ಹೊತ್ತಿಗೆ ಯರಗಟ್ಟಿ ತಲುಪಿದೆವು ... ಬಸ್ ಸೂಪರ್ ಫಾಸ್ಟ್ ... ರೋಡ್ hump ಬಂದರೂ ಸ್ಪೀಡ್ ನಲ್ಲಿ ಯಾವುದೇ ರೀತಿಯ ಇಳಿಕೆ ಇಲ್ಲ .... ಯರಗಟ್ಟಿ ಇಂದ ಗೋಕಾಕ ( ಬೆಂಗಳೂರು ಟು ಗೋಕಾಕ ) ಬಸ್ ಹಿಡಿದು ಸುಮಾರು ೧೨:೦೦ ರ ಹೊತ್ತಿಗೆ ಗೋಕಾಕ ಬಸ್ ನಿಲ್ದಾಣದಲ್ಲಿ ಇಳಿದಾಗ , ನಮ್ಮನ್ನು ಸ್ವಾಗತಿಸಲು ಮಂದಿ ( ಮದುಮಗ ) ಅಲ್ಲಿ ಹಾಜರ್ ...
ಹೋಟೆಲ್ ಅನಮೊಲ ದಲ್ಲಿ ನಮಗಾಗಿ ೨ ಕೋಣೆಗಳನ್ನು ರಿಸರ್ವ್ ಮಾಡಿದ್ದ ಮಂದಿ .. ಅಲ್ಲಿ ಹೋಗಿ ಚೆಕ್ ಇನ್ , ಉತ್ತಮವಾದ ರೂಮ್ ಗಳು , ಬಾಗಲಕೋಟೆಗೆ ಹೋಲಿಸಿದರೆ ಇದು ಪಂಚ ತಾರಾ ಹೋಟೆಲ್ ...ನಂತರ ಅನಮೊಲ ರೆಷ್ಟೊರಂಟ ದಲ್ಲಿ ಊಟ ...ಊಟ ಮುಗಿಸಿ ಸೆಟಲ್ ಆಗುವ ಹೊತ್ತಿಗೆ ೩:೦೦ ರ ಸಮಯ .. ಆನಂತರ ಗೋಕಾಕ ಜಲಪಾತ ನೋಡಲು ಹೊರಟೆವು ... ಮಳೆಗಾಲದಲ್ಲಾಗಿದ್ದರೆ ಜಲಪಾತ ಬಹಳ ಸುಂದರವಂತೆ ...ನೀರಿಲ್ಲದ ಕಾರಣ ಜಲಪಾತ ಅಷ್ಟೇನೂ ಸೊಗಸು ಅನಿಸಲಿಲ್ಲ .. ಹೀಗಾಗಿಯೂ ನದಿ ದಾಟಲು ನಿರ್ಮಿಸಿರುವ ತೂಗು ಸೇತುವೆ ಹಾಗೂ ಅಗಲವಾದ , ಕಲ್ಲು ಬಂಡೆಗಳಿಂದ ಕೂಡಿರುವ ನದೀ ಪಾತ್ರ ಸುಂದರವಾಗಿದೆ ....ನಾವು ತೂಗು ಸೇತುವೆ ದಾಟಿ , ಜಲಪಾತದ ಹತ್ತಿರ ಹೋಗಿ , ಬಹಳಷ್ಟು ಫೋಟೋ ತೆಗೆದು ಕೊಂಡೆವು ..

ಸುಮಾರು ೪:೩೦ ರ ಹೊತ್ತಿಗೆ ಹೋಟೆಲಿಗೆ ಹೊರಟೆವು ..ಸಾಕಷ್ಟು ಸಮಯ ಇದ್ದುದರಿಂದ ಸಂಜೆ ಯಾವುದಾದರೊಂದು ಸಿನಿಮಾ ನೋಡುವ ಪ್ಲಾನ್ ... ಆದರೆ ಹಾಗಾಗದೇ , ಸುಮಾರು ೭:೩೦ ರ ಹೊತ್ತಿಗೆ ಮದುವೆ ಮಂಟಪಕ್ಕೆ ( ಸಮುದಾಯ ಭವನ ) ಹೋದೆವು .. ಅಲ್ಲಿ ಮಂದಿಯ ಎದುರುಗೊಳ್ಳುವ ( ಹೆಣ್ನಿನವರು ಮಂದಿಯನ್ನು ಬರಮಾಡಿಕೊಳ್ಳುವ ) ಕಾರ್ಯಕ್ರಮ ... ಅದರ ನಂತರ ಗಂಡು , ಹೆಣ್ಣಿಗೆ ಅರಿಶಿನ ಹಚ್ಚುವ ಕಾರ್ಯಕ್ರಮ ... ಎಲ್ಲರೂ ಮಂದಿಗೆ ಅರಿಶಿನ ಹಚ್ಚಿದ್ದೋ ಹಚ್ಚಿದ್ದು ..... ಬ್ಲೆಯಚ್ ಮಾಡಿಸಿಕೊಂಡ ಅವನ ಮುಖ ಹಳದಿಯಾಗಿತ್ತು... . ನಂತರ ಆಂಟಿ ಯೊಬ್ಬರು ಎಲ್ಲರನ್ನೂ ಓಡಾಡಿಸಿಕೊಂಡು ಅರಿಶಿನ ಹಚ್ಚುತ್ತಿದ್ದನ್ನು ಕಂಡು ನಾನು ಮತ್ತು ಅನಿಲ ಅಲ್ಲಿಂದ ಎಸ್ಕಾಪೆ ...ಗುಂಪು ೧ ರ ಎಲ್ಲರಿಗೂ ಅರಿಶಿನದ ಲೇಪನ ..ಸ್ವಲ್ಪ ಹೊತ್ತಿನ ನಂತರ ಗಂಡು ಹೆಣ್ಣಿಗೆ ಸ್ನಾನದ ಪ್ರೊಗ್ರಾಮ್... ಹೊರಗಡೆ ಮಣೆ ಹಾಕಿ ತಲೆ ಮೇಲೆ ನೀರು ಸುರಿಯುವುದು... ನಾವು ಒಂದು ಪ್ಯಾಕ್ ಐಸ್ ಅನ್ನು ಮಂದಿ ಶರ್ಟ್ ಒಳಗೆ ಸುರಿದಾಗ ....ಮಂದಿಗೆ ಚಳಿ ಚಳಿ ತಾಳೆನು ಈ ಚಳಿಯ ........
ಎಲ್ಲ ಕಾರ್ಯಕ್ರಮ ಮುಗಿದು ಊಟ ಮಾಡುವ ಹೊತ್ತಿಗೆ ೧೦:೦೦ ರ ಸಮಯ ..ನಂತರ ಹೋಟೆಲಿಗೆ ಹೋಗಿ ಮಲಗುವ ಕಾರ್ಯಕ್ರಮ ...ಆದರೆ ಶಾಸ್ತ್ರದ ಪ್ರಕಾರ ಮಂದಿ ಮದುವೆ ಮಂಟಪದಲ್ಲೇ ಮಲಗಬೇಕು ಎಂದಾಗ ಮಂದಿ ಮುಖ ಬಾಡಿ ಹೋಗಿತ್ತು .. ನಾಗಿ , ಸಂಧ್ಯಾ ಹಾಗೂ ಪುಂಗಿ ಟಾಟಾ indica ಹತ್ತಿ ಹೋಟೆಲ್ ಸೇರಿದರು .. ನಾನು , ರಾಘು ಹಾಗೂ ಅನಿಲ ಹೋಟೆಲಿಗೆ ಹೋಗಲು ಕಾರ್ ಗಾಗಿ ಕಾಯಿತ್ತಿದ್ದೆವು ... ಆಗ ಪುಂಗಿಗೆ ಬಿಸ್ಕಿಟ್ ಹಾಕುವ ಸಲುವಾಗಿ ... "ನಾವು ಹೋಟೆಲಿಗೆ ಬರಲು ಆಗ್ತ ಇಲ್ಲ , ಮಂದಿಗೆ ಕಂಪನಿ ಕೊಡಲು ಇಲ್ಲೇ ಮಲಗುತ್ತೇವೆ ... ನೀನು ನಾಗಿ ರೂಮ್ ಅಲ್ಲಿ ಅಡ್ಜಸ್ಟ್ ಮಾಡ್ಕೋ " ಅಂದಾಗ ಪುಂಗಿ ಫುಲ್ ರೈಸ್ ಆದ ....ಆ ಕಡೆ ಇಂದ ಫೋನ್ ಮಾಡಿದ ಅವನ fiancee ಗೆ ಬೈದೆ ಬಿಟ್ಟ ...ಯಾಕೆ ರೈಸ್ ಆದ ಅಂತ ಅರ್ಥ ಆಗ್ಲಿಲ್ಲ ... ಪುಂಗಿ ರೈಸ್ ಆಗಿ ನಾಗಿ ರೂಮ್ ಗೆ ಹೋಗಿ ಅಲ್ಲಿ ಬಾಗಿಲು ತಟ್ಟಿದಾಗ , ಸಂಧ್ಯಾ ಅವರು ನಾಗಿಗೆ ತಗುಲಿಕೊಂಡರು ......ಹಾಕಿದ ಬಿಸ್ಕಿಟ್ ಸೂಪೆರ್ ಆಗಿ ಕೆಲ್ಸ ಮಾಡಿತ್ತು. ನಂತರ ನಾವು ಕಾರ್ ಹತ್ತಿ , ಹೋಟೆಲಿಗೆ ಹೋದಾಗ ೨೩:೩೦ ... ಪುಂಗಿನ ಕೂಲ್ ಮಾಡಿ ... ನಾನು ರಾಘು , ಅನಿಲ , ಪುಂಗಿ ಕಾರ್ಡ್ಸ್ ಆಡಲು ಕುಳಿತೆವು .. ಬೆಂಡ್ ಎತ್ತಿಸಿಕೊಂಡ ನಾಗಿ same day ಮಲಗುವಂತೆ ಅಯಿತು ... ... ನಮ್ಮ ಕಾರ್ಡ್ಸ್ ಆಟ ಮುಂದುವರೆದಿತ್ತು ....ಅಷ್ಟಾಗಿ ಮೂಡ್ನಲ್ಲಿ ಇಲ್ಲದ ಪುಂಗಿ ಮಲಗುವ ಯೋಚನೆ ಮಾಡಿದ .... ಇನ್ನೇನ್ ಮಲಗಬೇಕು ಆಗ ಹೇಳ್ದ "ಈ ಕಡೆ ಮಲಗ್ಬಾರ್ದು"....ಆಟ ಆಡುತ್ತಿದ್ದ ನಮಗೆಲ್ಲ ಒಂದೇ ಪ್ರಶ್ನೆ ಯಾವ್ ಕಡೆ ?? ನನಗೆ ಎದುರಾಗಿ ಕುಳಿತಿದ್ದ ಪುಂಗಿನ ಕೇಳಿದಾಗ , ಬಲಗೈಯನ್ನು ಪಕ್ಕಕ್ಕೆ ತೋರಿಸುತ್ತ ಅವನು ಮತ್ತೆ ಹೇಳಿದ್ದು "ಈ ಕಡೆ ಮಲಗ್ಬಾರ್ದು" ...ಹೊಟ್ಟೆ ನೋಯುವಷ್ಟು ನಕ್ಕಿದ್ದೆ ನಕ್ಕಿದ್ದು ..ಸಾಕಷ್ಟು ಬಿಸ್ಕಿಟ್ ತಿಂದು ರೈಸ್ ಆಗೊಗಿದ್ದ ಪುಂಗಿ ಸ್ವಲ್ಪ ಸಮಯದಲ್ಲೇ ನಿದ್ದೆಗೆ ಜಾರಿದ ... ನಾವು ಆಟ ಮುಂದುವರೆಸಿ ,ನಕ್ಕೂ ನಕ್ಕೂ ಮಲಗುವ ಹೊತ್ತಿಗೆ ಸಮಯ ೧:೩೦ ....ಮದುವೆ ಮಂಟಪ ದಲ್ಲಿ ಮಲಗಿದ್ದ ಮಂದಿಗೆ ಸ್ವಾತಂತ್ರ್ಯ ದ ಕೊನೆಯ ರಾತ್ರಿ ಅಷ್ಟೇನೂ ಆರಾಮದಾಯಕವಾಗಿರಲಿಲ್ಲ
ಈ ಹೊತ್ತಿಗೆ ಬೆಂಗಳೂರಿನಿಂದ ಗುಂಪು-೨ ಗೋಕಾಕಿಗೆ ಹೊರಟಿತ್ತು ...ಅದೇ ರೈಲು ...೨೧:೧೫ ರ ರಾಣಿ ಚೆನ್ನಮ್ಮ .....ನವದಂಪತಿ ಕಬೀರ ಅಂಡ್ ಮಾನಸ , ೨ ಎ ಸಿ ನಲ್ಲಿ ಪ್ರತ್ಯೇಕ ಆಸನ ಕಾದಿರಿಸಿದ್ದರು .....privacy ಬೇಕು ನೋಡಿ .... ಉಳಿದವರೆಲ್ಲ ೩ ಎ ಸಿ ಅಲ್ಲಿ ಪ್ರಯಾಣ...

ದಿನಾಂಕ ೪:೧೨:೨೦೦೭ : ( ಮದುವೆಯ ದಿನ )
ಮಂದಿ ಕಷ್ಟ ಪಟ್ಟು ರಾತ್ರಿ ಕಳೆದಿದ್ದ ...ಬೆಳಿಗ್ಗೆ ಎದ್ದು ತರಾತುರಿಯಲ್ಲಿ ಮದುವೆಗೆ ಸಿದ್ಧವಾಗಿದ್ದ
ನಾವು ಬೆಳಿಗ್ಗೆ ಎದ್ದು , ರೆಡಿ ಆಗುವ ಹೊತ್ತಿಗೆ ಸಮಯ ೯:೦೦ ...ಮಹೂರ್ತ ಸುಮಾರು ೯:೩೦ ರ ಸುಮಾರಿಗೆ ...ಗುಂಪು-೨ ಸುಮಾರು ೧೧:೦೦ ರ ಹೊತ್ತಿಗೆ ಗೋಕಾಕ ತಲುಪುವ ನಿರೀಕ್ಷೆ .... ನಾವುಗಳು ೯:೧೫ ರ ಸುಮಾರಿಗೆ ಮದುವೆ ಮಂಟಪಕ್ಕೆ ಹೋದೆವು ... ಮಂದಿಯ ಸ್ವಾತಂತ್ರ್ಯಾಪಹರಣಕ್ಕೆ ವೇದಿಕೆ ಸಿದ್ಧ ವಾಗಿತ್ತು ..ನಾವು ಮಂದುವೆ ಮಂಟಪ ತಲುಪುತ್ತಲೇ ಮಾಂಗಲ್ಯ ಧಾರಣೆ ನಡೆಯಿತು ....ಮೂರು ಗಂಟು ಹಾಕಿದ ಮಂದಿ ಸ್ವಾತಂತ್ರ್ಯ ಕಳೆದು ಕೊಂಡಿದ್ದ .. :) ದಿನಾಂಕ ೪:೧೨:೨೦೦೭ , ಸಮಯ ೯:೩೦ .....ಆದರೂ ಮುಖದಲ್ಲಿ ಒಂದು ರೀತಿಯ ಖಳೆ... ಹಿಂದಿನ ದಿನ ಹಚ್ಚಿದ ಅರಿಶಿನದ ಹೊಳಪು ಕಡಿಮೆ ಮಾಡಲು ಮುಖ ತಿಕ್ಕಿ ತಿಕ್ಕಿ ತೊಳೆದ ಪರಿಣಾಮವೋ ಏನೋ ? ಬಹಳ ದಿನಗಳ ನಿರೀಕ್ಷೆಯಲ್ಲಿದ್ದ ಮಂದಿಯ ಮದುವೆ ಆಗೇ ಹೊಯಿತಾ ??
ಈ ನಡುವೆ ೨ ಎ ಸಿ ಯಲ್ಲಿ ಪ್ರಯಾಣ ಮಾಡುತ್ತಿದ್ದ ಕಬೀರ , ಗೋಕಾಕಿಗೆ ಬಂದ ಮೇಲೆ ರೂಮ್ ಶೇರ್ ಮಾಡುವ ಬಗ್ಗೆ ತುಂಬ ತಲೆ ಕೆಡಿಸಿ ಕೊಂಡಿದ್ದ ... ಮದುವೆಗೆ ಮುಂಚೆ ಡೈನಮಿಕ್ ಅಂಡ್ ರನ್ ಟೈಮ್ದಿಶಿಶನ್ ಮೇಕರ್ ಆಗಿದ್ದ ಹುಡುಗ ಹೇಗಾಗೋದ ..... ಗುಂಪು-೨ ಗೋಕಾಕ ತಲುಪಿ , ಹೋಟೆಲಿಗೆ ಹೋಗಿ ರೆಡಿ ಆಗಿ ಮದುವೆ ಮಂಟಪ್ಪಕ್ಕೆ ಬರುವ ಹೊತ್ತಿಗೆ ೧೨:೦೦ ಹೊಡೆದಿತ್ತು ...

ಎಲ್ಲರೂ ಸೇರಿ ಮಂದಿಗೆ ಶುಭಾಷಯ ಹೇಳಿ ..ಊಟದ ಕಾರ್ಯಕ್ರಮ ... ಮತ್ತೆ ಖಾರವಾದ ಊಟ :) ಮುಗಿಸುವ ಹೊತ್ತಿಗೆ ಸಮಯ ಸುಮಾರು ೨.೩೦ ... ಮಂದಿಗೆ ಮತ್ತೊಮ್ಮೆ ಶುಭಾಶಯ ಹಾಗೂ ಸಮಾಧಾನ ಹೇಳಿ ನಡೆದುಕೊಂಡೇ ಹೋಟೆಲಿಗೆ ಹೊರೆಟೆವು ...ದಾರಿಯಲ್ಲಿ ಎಲ್ಲರೂ ಪಾಚಕ್ ( ಜಲ ಜೀರ ) ಹಾಗೂ ಲಿಂಬೂ ಸೋಡಾ ಕುಡಿದು ..ಹೋಟೆಲ್ ಮುಟ್ಟಿದೆವು .. ೫.೪೫ ರ ಬೆಂಗಳೂರು ರೈಲು ಹಿಡಿಯಲು ೫.೦೦ ಕ್ಕೆ ಹೋಟೆಲ್ ಚೆಕ್ ಔಟ್ ಮಾಡುವ ಪ್ಲಾನ್... ಹಾಗಾಗಿ ಸ್ವಲ್ಪ ಹೊತ್ತು ಕಾರ್ಡ್ಸ್ ಆಟ...೪.೪೫ ರ ಹೊತ್ತಿಗೆ ಎಲ್ಲರೂ ರೈಲು ನಿಲ್ದಾಣಕ್ಕೆ ಹೊರಡಲು ರೆಡಿ ಆದರು ... ಹೊರಡುವ ಮುನ್ನ ಕರದಂಟು ಹಾಗೂ ಕುಂದ ತೆಗೆದುಕೊಂಡೆವು ...ರೈಲು ನಿಲ್ದಾಣಕ್ಕೆ ಹೋಗುವ ದಾರಿಯಲ್ಲೇ ಗೋಕಾಕ ಜಲಪಾತ ಸಿಗುತ್ತದೆ , ಒಂದು ೫ ನಿಮಿಷ ಸಮಯ ಇದ್ದರಿಂದ ಗುಂಪು-೨ ರ ಮಂದಿ , ಜಲಪಾತದ ಒಂದು ದೃಶ್ಯ ನೋಡಲು ಬಯಸಿದರು ... ೫ ನಿಮಿಷದ ನಂತರ ಎಲ್ಲರೂ ಹಿಂತಿರುಗಿ ಬಂದರು ...ಜೀಪ್ ( ಟವೇರ ) ರೈಲು ನಿಲ್ದಾಣದತ್ತ ಹೊರಟಿತು ...ಜಲಪಾತದಿಂದ ಹಿಂದಿರುಗಿದ ಕಬಿರ ಯಾಕೋ ಕೊಪಿಸಿಕೊಂಡಿದ್ದ ... ( ?? ) ..೫:೩೫ ರ ಹೊತ್ತಿಗೆ ರೈಲು ನಿಲ್ದಾಣ ತಲುಪಿ ...೫:೪೫ ರೈಲು ಹಿಡಿದೆವು ...ಗುಂಪು-೧ ೩ ನೆ ಸ್ಲೀಪೆರ್ ಬೋಗಿಯಲ್ಲಿ, ಕಬೀರ ದಂಪತಿಗಳು ೨ ನೆ ಎ ಸಿ , ಮತ್ತು ಉಳಿದವರು ೩ ನೆ ಎ ಸಿ ಯಲ್ಲಿ... ಮತ್ತೆ ಕಾರ್ಡ್ಸ್ ಆಟ , ಹಾಗೆಯೇ ಟೈಮ್ ಪಾಸ್ , .... ಬೆಳಗಾವಿ ತಲುಪಿದ ನಂತರ ....ಕಬೀರ ದಂಪತಿಗಳನ್ನು ಆಗಾಗ ಮಾತಾಡಿಸಲು ಎಲ್ಲರೂ ಸರದಿಯಲ್ಲಿ ಹೋಗಿ ಬಂದರು ..... :) .... ಏನೋ ಸ್ವಲ್ಪ ತಿಂದು ರಾತ್ರಿ ೧೦:೦೦ ರ ಹೊತ್ತಿಗೆ ಮಲಗಿದೆವು ...ಬಹಳ ಚಳಿ ...ಹಾಗೂ ಹೀಗೂ ರೈಲು ಬೆಂಗಳೂರನ್ನು ತಲುಪಿದಾಗ ಸಮಯ ಬೆಳಿಗ್ಗೆ ೭.೪೫ ... ಬಹು ದಿನದ ನಿರೀಕ್ಷೆಯ ಮಂದಿ ಮದುವೆ , ಮಜಾ ಹಾಗೂ ಧೀರ್ಘ ಪ್ರವಾಸದೊಂದಿಗೆ ಶುಭಂ ಅಯಿತು ..

Author : Sharath, Bangalore
Started : Dec 10, 2007
End : Dec 15, 2007
Photos link
http://picasaweb.google.co.uk/chinumari/MandiMadve

No comments: